ಚಿತ್ರ: ಐಶ್ವರ್ಯ
ಸಾಹಿತ್ಯ: ಕೆ.ಕಲ್ಯಾಣ್
ಸಂಗೀತ: ರಾಜೇಶ್ ರಾಮನಾಥ್
ಗಾಯನ: ಕುನಾಲ್ ಗಾಂಜವಾಲ

ಐಶ್ವರ್ಯ.. ಐಶ್ವರ್ಯ
ನೀ ನನ್ನ ಉಸಿರು ಕಣೆ!
ನಿನ್ನಲ್ಲು ನನ್ನಲ್ಲು
ಈ ಪ್ರೀತಿ ಒಂದೆ ಕಣೇ!
ಹೇಳು.. ನಿನಗಾಗಿ ನಾನಿಲ್ಲವೇನು
ಪ್ರೀತಿನೆ ಉಸಿರಲ್ಲವೇನು
ನೀನು, ನಾನು!

ನಾನೊಂದು ಬಂಜರ
ನೀನಲ್ಲಿ ಇಂಚರ
ನೀ ಹಾಡಿದಾಗಲೆ
ನಮ ಪ್ರೀತಿ ಸುಂದರ
ಬಾ ನನ್ನ ಹತ್ತಿರ
ಬೇಕಿಲ್ಲ ಅಂತರ
ನಾವೊಂದೆ ಆದರೆ
ಸುಖವೇ ನಿರಂತರ
ಈ ಪ್ರೀತಿ ಎಂದು ನಿನಗಾಗಿ
ಕಾಯುತಿದೆ ಗಿಳಿಯಾಗಿ
ನಿನ್ನೆದೆಯ ಮಾತು ತಿಳಿಸು
ಮನಸಾರೆ ಹಿತವಾಗಿ

ಐಶ್ವರ್ಯ.. ಐಶ್ವರ್ಯ
ನೀ ನನ್ನ ಉಸಿರು ಕಣೆ!
ನಿನ್ನಲ್ಲು ನನ್ನಲ್ಲು
ಈ ಪ್ರೀತಿ ಒಂದೆ ಕಣೇ!
ಹೇಳು.. ನಿನಗಾಗಿ ನಾನಿಲ್ಲವೇನು
ಪ್ರೀತಿನೆ ಉಸಿರಲ್ಲವೇನು
ನೀನು, ನಾನು!

ನೀ ಸ್ವರಗಳಾದರೆ
ನಾ ಕವಿತೆ ಯಾಗುವೆ
ನೀ ಕಾಣದಾದರೆ
ಕಲ್ಲಾಗಿ ಹೋಗುವೆ
ನೀ ಅಪ್ಪಿಕೊಳ್ಳದೆ 
ಎದೆ ಬಡಿತ ಎಲ್ಲಿದೆ?
ನೀನೆಲ್ಲೆ ಹೋದರು
ನನುಸಿರು ಅಲ್ಲಿದೆ
ನಿಜವಾಗಿ ಹೇಳು ಎಲ್ಲಿರುವೆ?
ನನ ಬಿಟ್ಟು ಹೇಗಿರುವೆ?
ಈ ಪ್ರಾಣ ಹೋದರು ಸರಿಯೇ 
ನಿನಗಾಗಿ ಕಾದಿರುವೆ!

ಐಶ್ವರ್ಯ.. ಐಶ್ವರ್ಯ
ನೀ ನನ್ನ ಉಸಿರು ಕಣೆ!
ನಿನ್ನಲ್ಲು ನನ್ನಲ್ಲು
ಈ ಪ್ರೀತಿ ಒಂದೆ ಕಣೆ!
ಹೇಳು.. ನಿನಗಾಗಿ ನಾನಿಲ್ಲವೇನು
ಪ್ರೀತಿನೆ ಉಸಿರಲ್ಲವೇನು
ನೀನು, ನಾನು!

Category: ಕನ್ನಡ ಚಿತ್ರಸಾಹಿತ್ಯ
Category: ಐಶ್ವರ್ಯ ಚಿತ್ರ
Category: ಕೆ.ಕಲ್ಯಾಣ್ ಸಾಹಿತ್ಯ